== ಗಾಂಧಿ­ವಾದಿ ಸುರೇಂದ್ರ ಕೌಲಗಿಯವರಿಗೆ ಬಜಾಜ್‌ ಪ್ರಶಸ್ತಿ == ಗಾಂಧಿ­ವಾದಿ ಹಾಗೂ ಜಯ­ಪ್ರಕಾಶ್ ನಾರಾಯಣ ಅವರ ಸಹಾ­ಯಕ­ರಾಗಿದ್ದ ಕನ್ನಡಿಗ ಮೇಲು­ಕೋಟೆಯ ಸುರೇಂದ್ರ ಕೌಲಗಿ ಅವರಿಗೆ ಶುಕ್ರವಾರ ಪ್ರತಿಷ್ಠಿತ ಜಮ್ನಾಲಾಲ್‌ ಬಜಾಜ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು. ನೊಬೆಲ್‌ ಪಾರಿತೋಷಕ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ಅವರು ಹತ್ತು ಲಕ್ಷ ರೂಪಾಯಿ ನಗದು ಒಳಗೊಂಡಿರುವ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೌಲಗಿ, ರಾಜಕೀಯ ಕ್ಷೇತ್ರದ ಕೊಳೆ ತೊಳೆ­ಯಲು ಸ್ವಚ್ಛ ಭಾರತ ಅಭಿಯಾನ­ವನ್ನು ರಾಜಕೀಯದಲ್ಲೂ ಜಾರಿಗೆ ತರ­ಬೇಕು ಎಂದು ಅಭಿ­ಪ್ರಾಯಪಟ್ಟರು. ಗಾಂಧಿ ಮೌಲ್ಯಗಳನ್ನು ಎತ್ತಿ ಹಿಡಿದ ಸುಲಕ್‌ ಶ್ರೀನಿವಾಸ್, ಗ್ರಾಮೀಣಾಭಿ­ವೃದ್ಧಿ­ಗಾಗಿ ಗುಜ­ರಾತ್‌ನ ರಾಮ್‌ ಕುಮಾರ್‌ ಸಿಂಗ್, ಮಧ್ಯ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಚೆನ್ನುಪತಿ ವಿದ್ಯಾ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು. == ನೋಡಿ == 2014ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಮ್ಮಾನ , ಡಾ.ರಾಧಾಕೃಷ್ಣನ್ ಶಿಕ್ಷಣರತ್ನ ರಾಷ್ಟ್ರೀಯ ಪ್ರಶಸ್ತಿ‎; == ಆಧಾರ == ಪ್ರಜಾವಾಣಿ : ೨೯-೧೧-೨೦೧೪